Saturday, December 29, 2012

ದಾಮಿನಿ ಒಂದು ಹೆಣ್ಣಲ್ಲ!
















ಹೆಣ್ಣ ರೂಪದಿ
ಜನುಮವೆತ್ತಿದ
ದಾಮಿನಿ
ಒಬ್ಬಳು ಹೆಣ್ಣಲ್ಲ.
ಭಾರತದ
ಅಸಂಖ್ಯಾತ
ಹೆಣ್ಣು ಮಕ್ಕಳ
ಕಣ್ಣೊರೆಸಲು
ಹುಟ್ಟಿದ
ಮಹಾ ಶಕ್ತಿ.

ದಾಮಿನಿ
ಅತ್ಯಾಚಾರಕ್ಕೆ
ಬಲಿಯಾಗಿಲ್ಲ.
ಅತ್ಯಾಚಾರವೆಂಬ
ಪೈಶಾಚಿಕ
ಕೃತ್ಯದ ವಿರುದ್ದ
ಜನ ಜಾಗೃತಿಗಾಗಿ
ಬೆಳಗಿ ಹರಿದ
ಶಕ್ತಿಯ ಮಹಾ  
ಸಂಚಯ.

ದಾಮಿನಿಯ
ನೆನಪಿಂದ
ಹೆಣ್ಣು ಗಂಡುಗಳ
ನಡುವೆ
ಬೆಸೆಯಲೊಂದು
ಮಾನವೀಯ
ಸಂಬಂದದ -
ಬೆಸುಗೆ.

ಉಳಿಯಲಿ
ದಾಮಿನಿಯ
ಹೆಸರು
ಅಜರಾಮರವಾಗಿ
ಪ್ರೀತಿಯ
ಸಂಕೇತವಾಗಿ
ಹುಟ್ಟಲಿ
ಮತ್ತೊಂದು
ಪ್ರೇಮ ಮಹಲು
ಹೃದಯ
ಹೃದಯಗಳಲಿ
ದಾಮಿನಿ
ಮಹಲಾಗಿ!

                          ಸ್ಪೂರ್ತಿ
                          ಬಂಟಕಲ್ಲು
                          29-12-2012

 .

 

 


 

Wednesday, December 26, 2012

ಚೆಂಗುಲಾಬಿ












ಬಾ ಗೆಳತಿ ನನ್ನೊಡತಿ
ಸುಕುಮಾರಿ ಓ ಗರತಿ
ನೀನೆನ್ನ ಹೃದಯವ
ಸೇರು ಬಾ.

ಪ್ರೀತಿಯ ನೀ ಜಯಿಸಿ
ಪ್ರೇಮದ ತೊಟ್ಟಿಲಲಿ
ಹಾಡಿ - ಪಾಡಿ ನೀ
ತೂಗು ಬಾ.

ಕೆಂದುಟಿಯ ನಗೆ ಬೀರಿ
ತೆಳ್ಳನೆಯ ನಡಿಗೆಯಲಿ
ಮೆಲ್ಲನೆ ಬಳಕುತ
ನಡೆದು ಬಾ.

ಸೂರ್ಯಾಸ್ತ ಸಮಯದಿ
ಸಾಗರದ ತೀರದಿ
ತಂಗಾಳಿಯಂತೆ ನೀ
ಸೋಂಕು ಬಾ.

ಚೆಲುವೆ ಚೆಲುವಿನ ರಾಣಿ
ಒಲವನ್ನು ನೀ ಬಯಸಿ
ಬೆಳದಿಂಗಳಂತೆ ನೀ
ಹರಿದು ಬಾ.

ಹಸುರಾದ ತೋಟದಿ
ಮುಳ್ಳಿನ ಗಿಡದಲ್ಲಿ
ಗುಲಾಬಿಯಂತೆ ನೀ
ಹುಟ್ಟಿ ಬಾ.

ದುಂಬಿಯು ನಾನಾಗಿ
ತೋಟಕ್ಕೆ ಬಂದಾಗ
ಮಧುವನು ನೀ
ಉಣಿಸು ಬಾ.

ಸ್ಪೂರ್ತಿ
ಬಂಟಕಲ್ಲು
1-1-1984

(ಪ್ರಥಮ ವರ್ಷದ ಕಾಲೇಜು ಜೀವನದಲ್ಲಿ ಬರೆದ ಕವನ. ಕಾ.ವಾ. ಆಚಾರ್ಯರ ಪ್ರೋತ್ಸಾಹ ಕೂಸು. ಇದುಕೂಡ 1985-86 ನೇ ಸಾಲಿನಲ್ಲಿ, ಯಂ.ಎನ್.ಜೈ ಪ್ರಕಾಶ್ ಸ್ಮಾರಕ ಪುರಸ್ಕಾರಕ್ಕೆ ಆಯ್ಕೆಯಾದ ಕವನಗಳಲ್ಲಿ ಒಂದು. )


 

ಮಹಾತ್ಮ ಗಾಂದಿ















ಭಾರತಾಂಬೆಯ ಪವಿತ್ರ ಭೂಮಿಲಿ
ಹುಟ್ಟಿ ಬೆಳೆದರು ಗಾಂದೀಜಿ
ಸ್ವತಂತ್ರ ಭಾರತ ಕಟ್ಟಿಕೊಳ್ಳುವ
ಆಶೆ ಹೊತ್ತವರು ಬಾಪೂಜೀ.

ಆಂಗ್ಲ ಬಟ್ಟೆಯ ಬೆಂಕಿಗೆ ಸೇರಿಸಿ
ಖಾದಿ ಧಿರಿಸಿ ಬದುಕಿದರು
ತಯಾರಿಸಿ ಖಾದಿಯ ಎನ್ನುತ
ಜನತೆಗೆ ಚರಕವ ನೀಡಿದರು.

ಭಾರತ ವೀರರ ಗುಂಪನು ಸೇರಿಸಿ
ಕಾಂಗ್ರೆಸ್ ಪಾರ್ಟಿಯ ಕಟ್ಟಿದರು
ಅನೇಕ ಚಳುವಳಿ ನಾಯಕರಾಗಿ
ಕಾಂಗ್ರೆಸ್ ಪಾರ್ಟಿಯ ಬೆಳೆಸಿದರು.

ಆಂಗ್ಲರೊಂದಿಗೆ ಕೂಡಿ ಬಾಳಲಾರೆ
ಎನ್ನುವ ಶಪಥವ ಮಾಡಿದರು
ಉಪ್ಪಿನ ಮೇಲಿನ ತೆರಿಗೆಯ ಖಂಡಿಸಿ
ಉಪ್ಪಿನ ಚಳುವಳಿ ಸಾರಿದರು.

ಸತ್ಯ ಅಹಿಂಸೆಯ ಬಾಣ ತುಂಬಿದ
ಬತ್ತಳಿಕೆಯನ್ನವರು ಎತ್ತಿದರು
ಭಾರತ ಬಿಟ್ಟು ತೊಲಗಿರಿ ಆಂಗ್ಲರೆ
ಎನ್ನುವ ಬಾಣವ ಹೂಡಿದರು.

ಬಾಪೂರವರ ಭೇರಿಯ ಕೇಳಿ
ಆಂಗ್ಲರು ಗಡಗಡ ನಡುಗಿದರು
ಭಾರತೀಯರಿಗೆ ಭಾರತವನ್ನು
ಬಿಟ್ಟು ಬಿಳಿಯರು ಓಡಿದರು.

ಭಾರತಾಂಬೆಯ ಸ್ವತಂತ್ರ ಗೊಳಿಸಿದ
ಕೀರ್ತಿಲಿ ಗಾಂದಿ ತೇಲಿದರು
ಸತ್ಯ ಅಹಿಂಸೆಯ ದಾರಿಯ ತುಳಿದು
ಕೊನೆಗೂ ಮಹಾತ್ಮರೆನಿಸಿದರು.

ಸ್ಪೂರ್ತಿ
ಬಂಟಕಲ್ಲು
15-11-1984
(ಪ್ರಥಮ ವರ್ಷದ ಕಾಲೇಜು ಜೀವನದಲ್ಲಿ ಬರೆದದ್ದು)
 

Thursday, December 20, 2012

ನಕಲು ಮಾಡುವ ಮುನ್ನ....


 









ಭಾರತದ ನಿತ್ಯ ಪಂಚಾಂಗವನ್ನು 21-12-2012ರ ವರೆಗೆ ನಕಲು ಮಾಡುವಾಗ ನಕಲುಗಾರ ಮಡಿದ.ಅವನ ನಕಲು ಕ್ಯಾಲೆಂಡರಿನ ಹಿಂಬಾಲಕರು 21-12-2012ರ ವರೆಗೆ ಮಾತ್ರ ಉಳಿಗಾಲ ಮತ್ತೆ ಪ್ರಳಯವಾಗಿ ಭೂಮಿ, ಮನುಕುಲ ಎಲ್ಲಾ ನಾಶವಾಗುತ್ತೆ ಎಂದು ನಂಬಿ, ಬದುಕುವ ಆಶೆ ಇದ್ದವರಿಗೂ ಜೀವ ಭಯ ತೋರಿಸಿ ನಲಿದಾಡಿ ಮೆರೆದರು! ಕೆಲವರು ಎತ್ತರದ ಗುಡ್ಡದಲೊಂದು ಅತೀ ಬೆಲೆ ಬಾಳುವ ಮನೆ ಖರಿದಿಸಿ ಉಳಿದುಕೊಂಡರು! ಇನ್ನು ಕೆಲವರು ಗುಂಡು ನಿರೋಧಕ ಕಂಟೈನರ್ನೋಳಗೊಂದು ಸುಸಜ್ಜಿತ ಮನೆಯ ಮಾಡಿ ಅವಿತುಕೊಂಡರು! ಮತ್ತೆ ಕೆಲವರು ದೇವಾ ಪ್ರಳಯದಿಂದ ಉಳಿಸೆಮ್ಮನು ಎಂದು ಬೇಡಿಕೊಂಡರು.

ನಮ್ಮ ದೇಶದ ನಿತ್ಯ ಪಂಚಾಂಗವನ್ನು ನಂಬುವವರು ಪ್ರತೀ ವರ್ಷ ದಶಂಬರ 21ಕ್ಕೆ ಉತ್ತರಾಯಣ (ಜೂನ್ 21ಕ್ಕೆ ದಕ್ಷಿಣಾಯಣ)ದ ಆರಂಭ ಎಂಬುದಾಗಿ ನಂಬಿ ಪವಿತ್ರ ಉತ್ತರಾಯಣದ ಸ್ವಾಗತಕ್ಕೆ ಮನೆ, ಮಠ, ಮದಿರಗಳ ಮುಂದೆ ರೋಗೊಲಿ ಬಿಡಿಸಿ ಉತ್ತರ್ರಯಣಕ್ಕೆ ಸ್ವಾಗತ ಕೋರಿದರು! ಇದು ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದಿನಿಂದ ನಂಬಿ ಆಚರಿಸುತ್ತಿರುವ ಪದ್ಧತಿ.

ಭಾರತೀಯ ಪಂಚಾಗವನ್ನು ಗೇಲಿ ಮಾಡುವ ಮಂದಿ ಅಮಾವಾಸ್ಯೆ, ಹುಣ್ಣಿಮೆ, ಗ್ರಹಣ ಇತ್ಯಾದಿ ನಿಗದಿತ ದಿನದಂದು ಗೋಚರಿಸುತ್ತದೆ ಎಂದು ಪ್ರಪಂಚದ ವಿಜ್ಞಾನಿಗಳಿಗೆ ತೋರಿಸಿದೆ ಎಂಬುದನ್ನು ಮರೆಯಬಾರದು. ಭಾರತೀಯರು ನಿಜವಾಗಿಯೂ ಈ ಬಗ್ಗೆ ಹೆಮ್ಮೆ ಪಡಬೇಕಾಗಿದೆ.

                                                                                                                                  ಶ್ರೀನಿವಾಸ್ ಪ್ರಭು
                                                                                                                                  ಸ್ಪೂರ್ತಿ
                                                                                                                                   ಬಂಟಕಲ್ಲು
                                                                                                                                   21-12-2012



Saturday, December 15, 2012

Friday, December 14, 2012

ಗುರು ಶಿಷ್ಯ ಸಂಬಂಧ



ಗುರು ಶಿಷ್ಯ ಸಂಬಂಧ







ಗುರು ಶಿಷ್ಯ ಸಂಬಂಧ
ಹೇಗೈತೆ ಕೇಳಯ್ಯಾ
ಕುಡಿಕೆ ಕುಂಬಾರ
ನಂತೈತೆ.

ಪ್ರಕೃತಿಯಲ್ಲಿರುವ
ಮಣ್ಣರಾಶಿಯ ತಂದು
ತಟ್ಟಿ ಮೆಟ್ಟಿ ಕುಟ್ಟಿ
ಇಟ್ಟಂತೈತೆ.

ಹಳಸಲು ಮಣ್ಣ
ಚಕ್ರದ ಮೇಲಿಟ್ಟು
ಗಿರ ಗಿರನೆ ತಿರುಗಿ
ಸುತ್ತಿದಂತೈತೆ.

ಸುತ್ತಿದ ಮಡಕೆಯ
ಚಕ್ರದಿಂದಿಳಿಸಿ
ಹದಗೋಲು ಹಿಡಿದು
ತಟ್ಟಿದಂತೈತೆ.

ದಿನ ದಿನಾ ತಟ್ಟಿ
ಮಡಕೆಯ ದಿಟ್ಟಿ
ಸುಂದರ ಸುಂದರ
ಆಗೈತೆ.

ಸುಂದರ ಮಡಕೆಯ
ಅಗ್ನಿ ಕುಂಡದಲಿಲಿಟ್ಟು
ಒಳಿತಾ ಕೆಡುಕಾ
ನೋಡೈತೆ.

ಒಳಿತಾದ ಮಡಕೆಯ
ಸಂತೆಗೆ ಒಯ್ದಾಗ
ಮಡಕೆಯ ಬೆಲೆಯು
ಬಂದೈತೆ.

                    ಸ್ಪೂರ್ತಿ
                    ಬಂಟಕಲ್ಲು

(ಈ ಕವನವನ್ನು ನಾನು ನನ್ನ ಪೂಜ್ಯ ಗುರುವರ್ಯರಾದ ಶ್ರೀ ರಾಧಾಕೃಷ್ಣ ಪ್ರಭುರವರಿಂದ ಸ್ಫೂರ್ತಿ ಪಡೆದು 7ನೇ ತರಗತಿಯಲ್ಲಿರುವಾಗ ರಚಿಸಿದ್ದೆ. ಸುಮಾರು 6ವರ್ಷಗಳ ನಂತರ ಯಂ.ಅರ್.ಯಸ್.ಕಾಲೇಜಿನ ಸೃಜನಾ ಫಲಕದಲ್ಲಿ ಬೆಳಕು ಕಂಡು ಕಾ.ವಾ.ಆಚಾರ್ಯರ ಪ್ರೋತ್ಸಾಹದೊಂದಿಗೆ 1987ರಲ್ಲಿ ಮೈಸೂರಿನಲ್ಲಿ ಬಿಡುಗಡೆಯಾದ " ನೂರು ಕವಿಗಳು ನೂರು ಕವನಗಳು" ಎಂಬ ಕವನ ಸಂಕಲನದಲ್ಲಿ ಪ್ರಕಟವಾಗಿತ್ತು. ಇದೀಗ ನನ್ನ ಈ ಚೊಚ್ಚಲ ಕವನಕ್ಕೆ ಇಪ್ಪತ್ತೈದರ ಸಂಭ್ರಮ - ಶ್ರೀನಿವಾಸ್ ಪ್ರಭು, 12-12-2012)
 

Wednesday, December 12, 2012

ಸಹಕಾರ...

ಮಧು ಚಂದ್ರ
 










ಪನ್ನೀರ ಮಿಂದು
ಪಲ್ಲಂಗ ಹೊತ್ತು,
ಮಹಡಿ ಏರಿತ್ತು
ನವ ಜೋಡಿ,
ಮಧು ಚಂದ್ರಕೆ.

ತಾರಸೀ ಮೇಲಿನ
ತಂಗಾಳಿ ತಂಪಿಗೆ,
ಪಾರಿಜಾತದ
ಸುವಾಸನೆಯ ಇಂಪಿಗೆ,
ಮೈ ಮರೆತ...
ಮಿಥುನ ಶಿಲ್ಪಗಳ
ಕಂಡು-
ಚಂದ್ರನೂ ನಾಚಿ...
ಮೋಡಗಳ ತೆರೆ ಎಳೆದು,
ಸಹಕರಿಸಿದ!

                           ಸ್ಪೂರ್ತಿ
                           ಬಂಟಕಲ್ಲು
                           12-12-12

 

Tuesday, December 11, 2012

ರಾದ್ದಾಂತ



ಪ್ರೇಮ ಪತ್ರ












ಪ್ರೇಮ ಕವಿಯ ಒಂದು ಕವನ
ಪ್ರೀತಿ ರಾಣಿ ಕೈಯ ಸೇರಿ
ಗಲ್ಲಿ ಗಲ್ಲಿಯಲ್ಲಿ
ಭಾರಿ  ಸುದ್ದಿಯಾಯಿತು
ರಾದ್ದಾಂತವಾಯಿತು.

ನನ್ನ ರಾಣಿ ನೀನು ಚೆಂದ
ನಿನ್ನ ರಾಜ ನಾನು ಎಂದ
ಕವಿಯ ವಾಣಿ ಕೇಳಿ
ಜನರ ಕೋಪ ಉರಿಯಿತು.

ನೀನೊಂದು ಹೂವಿನಂತೆ
ಬರುವೆ ನಾನು ದುಂಬಿಯಂತೆ
ಎಂಬೆರಡು ಸಾಲು ಜನರ
ಕಿವಿಯ ತಟ್ಟಿತು.

ನಿನ್ನ ಹೃದಯ ಹಾಲಿನಂತೆ
ನನ್ನ ಹೃದಯ ಜೇನಿನಂತೆ
ಎಂಬ ಎರಡು ಕೊಂಡಿ ಅದಕೆ
ಸೇರಿಕೊಂಡಿತು.

ಪ್ರೇಮ ಕವಿಯ ಕವನ ಓದಿ
ಕಾವೇರಿ ಕುಪಿತ ಮಂದಿ
ದೊಳು ಗುದ್ದಿ ಜನರ
ಕಿವಿ ತಮಟೆ ಒಡೆದರು.

ಪ್ರೇಮ ಕವನ ಓದಿಕೊಂಡು
ಹದಿ ಹರೆಯ ಪುಳಕಗೊಂಡು
ಚಿಗುರುಮೀಸೆ ತಿರುವಿಕೊಂಡು
ತುಂಟರಾದರು!
ಕವಿಯ ಬಂಟರಾದರು.

                               ಸ್ಪೂರ್ತಿ
                                ಬಂಟಕಲ್ಲು
                                12.12.12