
ಭಾರತಾಂಬೆಯ ಪವಿತ್ರ ಭೂಮಿಲಿ
ಹುಟ್ಟಿ ಬೆಳೆದರು ಗಾಂದೀಜಿ
ಸ್ವತಂತ್ರ ಭಾರತ ಕಟ್ಟಿಕೊಳ್ಳುವ
ಆಶೆ ಹೊತ್ತವರು ಬಾಪೂಜೀ.
ಆಂಗ್ಲ ಬಟ್ಟೆಯ ಬೆಂಕಿಗೆ ಸೇರಿಸಿ
ಖಾದಿ ಧಿರಿಸಿ ಬದುಕಿದರು
ತಯಾರಿಸಿ ಖಾದಿಯ ಎನ್ನುತ
ಜನತೆಗೆ ಚರಕವ ನೀಡಿದರು.
ಭಾರತ ವೀರರ ಗುಂಪನು ಸೇರಿಸಿ
ಕಾಂಗ್ರೆಸ್ ಪಾರ್ಟಿಯ ಕಟ್ಟಿದರು
ಅನೇಕ ಚಳುವಳಿ ನಾಯಕರಾಗಿ
ಕಾಂಗ್ರೆಸ್ ಪಾರ್ಟಿಯ ಬೆಳೆಸಿದರು.
ಆಂಗ್ಲರೊಂದಿಗೆ ಕೂಡಿ ಬಾಳಲಾರೆ
ಎನ್ನುವ ಶಪಥವ ಮಾಡಿದರು
ಉಪ್ಪಿನ ಮೇಲಿನ ತೆರಿಗೆಯ ಖಂಡಿಸಿ
ಉಪ್ಪಿನ ಚಳುವಳಿ ಸಾರಿದರು.
ಸತ್ಯ ಅಹಿಂಸೆಯ ಬಾಣ ತುಂಬಿದ
ಬತ್ತಳಿಕೆಯನ್ನವರು ಎತ್ತಿದರು
ಭಾರತ ಬಿಟ್ಟು ತೊಲಗಿರಿ ಆಂಗ್ಲರೆ
ಎನ್ನುವ ಬಾಣವ ಹೂಡಿದರು.
ಬಾಪೂರವರ ಭೇರಿಯ ಕೇಳಿ
ಆಂಗ್ಲರು ಗಡಗಡ ನಡುಗಿದರು
ಭಾರತೀಯರಿಗೆ ಭಾರತವನ್ನು
ಬಿಟ್ಟು ಬಿಳಿಯರು ಓಡಿದರು.
ಭಾರತಾಂಬೆಯ ಸ್ವತಂತ್ರ ಗೊಳಿಸಿದ
ಕೀರ್ತಿಲಿ ಗಾಂದಿ ತೇಲಿದರು
ಸತ್ಯ ಅಹಿಂಸೆಯ ದಾರಿಯ ತುಳಿದು
ಕೊನೆಗೂ ಮಹಾತ್ಮರೆನಿಸಿದರು.
ಸ್ಪೂರ್ತಿ
ಬಂಟಕಲ್ಲು
15-11-1984
(ಪ್ರಥಮ ವರ್ಷದ ಕಾಲೇಜು ಜೀವನದಲ್ಲಿ ಬರೆದದ್ದು)
No comments:
Post a Comment