Friday, April 19, 2013

ಸಹಾಯಾಸ್ತಗಳು













ಕಳೆದ 27 ಮಾರ್ಚ್ 2013 ರಂದು ಹಠಾತ್ ನಿಧನರಾದ ಕವಿ, ಲೇಖಕ ರವಿ ಮೂರ್ನಾಡ್ ಅವರು ಭಾರತಕ್ಕೆ ಬಂದು ನೆಲೆಸುವ ಕನಸು ಕೊನೆಗೂ ನನಸಾಗಲೇ ಇಲ್ಲ. ಇದೇ ಜೂನ್ ನಂತರ ಭಾರತಕ್ಕೆ ಬಂದು ನೆಲೆಸುವ ಇರಾದೆಯನ್ನು ತನ್ನ ಹಲವು ಆತ್ಮೀಯರೊಂದಿಗೆ ಹಂಚಿಕೊಂಡಿದ್ದ ರವಿ ತಾಯ್ನಾಡ ನೆಲವ ಮತ್ತೆ ತಲುಪುವ ಋಣವನ್ನು ಕಾಣದೇ ದೂರದ ಕ್ಯಾಮರೂನಿನಲ್ಲಿ ಅಸ್ತಂಗತರಾಗಿದ್ದು ನಮಗೆಲ್ಲಾ ತಿಳಿದ ವಿಷಯವೆ.

ಅವರು ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಅವರಿಗೆ ಸಿಕ್ಕುತ್ತಿದ್ದ ಸಂಬಳ ಮಾತ್ರ ಅತೀ ಕಡಿಮೆ . ನೆಲೆಸಲು ಸ್ವಂತ ಸೂರಿಲ್ಲದ ರವಿಯವರು ಆ ಸಂಬಳದಿಂದ ಸ್ವಂತ ಮನೆ ಕಟ್ಟುವ ಮತ್ತು ಮಗುವಿಗೆ ಒಳ್ಳೆಯ ವಿಧ್ಯಾಭ್ಯಾಸ ಕೊಡಿಸುವುದು ಕಷ್ಟ ಎಂದು ಬೇಸರದಿಂದ ಹೇಳುತ್ತಿದ್ದರು, ಅಲ್ಲದೆ  ತೀವ್ರ ಬಡತನದಲ್ಲಿದ್ದ ಕುಟುಂಬಕ್ಕೆ ಅವರೊಬ್ಬರೇ ಅಧಾರಸ್ತಂಭವಾಗಿದ್ದರು . ಪುಟ್ಟ ಕುಟುಂಬವೊಂದನ್ನು ಸಾಕಿ ಸಲಹುತ್ತಿದ್ದ ರವಿಯವರ ನಿಧನದಿಂದ ಅವರ ಪತ್ನಿ ತುಂಬಾ ನೊಂದು ಕೊಂಡಿದ್ದಾರೆ ಎಂಬುದಾಗಿ ಕನ್ನಡ ಬ್ಲಾಗ್ ಬಳಗದವರಿಂದ ತಿಳಿದು ವಿಷಯದ ಗಂಭಿರ್ಯತೆ ಮನ ತಟ್ಟಿತು.

ಕನ್ನಡಿಗರೆಲ್ಲರನ್ನೂ ಅತಿಯಾಗಿ ಪ್ರೀತಿಸುತ್ತಿದ್ದ ಹಾಗೂ ಪ್ರೋತ್ಸಾಹಿಸುತ್ತಿದ್ದ ಒಬ್ಬ ಶ್ರೀಮಂತ ಸಾಹಿತಿಯ ಬಡತನದ ಜೀವನವನ್ನು ನೋಡಿದಾಗ ಅವರ ಅಭಿಮಾನಿಗಳಾದ ನಮ್ಮೆಲ್ಲರ ಕಣ್ಣು ಮಂಜಾಗುತ್ತದೆ . ಈಗ ಅವರ ಕುಟುಂಬ ಅತಂತ್ರ ಸ್ಥಿತಿಯಲ್ಲಿರುವಾಗ ನಾವೆಲ್ಲರೂ ನಮ್ಮ ಶಕ್ತ್ಯಾನುಸಾರ ಸಹಾಯ ಮಾಡುವುದು ಧರ್ಮದ ವಿಷಯವೆ.


ನಾನು ನನ್ನ ಮಕ್ಕಳ ಹುಟ್ಟು ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿ, ಅನಾವಶ್ಯಕ ಖರ್ಚುಮಾಡುವ ದುಡ್ಡನ್ನು ಪ್ರತೀವರ್ಷ (೧೪) ವರ್ಷಗಳಿಂದ, ಬಡವರಿಗೆ, ನಿರ್ಗತಿಕರಿಗೆ, ಹೆಣ್ಣುಮಕ್ಕಳ ಮದುವೆಗೆ, ಬಡ ಮಕ್ಕಳ ವಿದ್ಯಾಭ್ಯಾಸಭ್ಯಸಕ್ಕೆಂದು ಕೊಡುವ ಪರಿಪಾಠ ಇಟ್ಟು ಕೊಂಡು ಬಂದಿರುವ ವ್ಯಕ್ತಿ. ಈ ವರ್ಷದ ಮೊತ್ತವನ್ನು ಹಠಾತ್ ನಿಧನರಾದ ಕವಿ, ಲೇಖಕ ರವಿ ಮೂರ್ನಾಡ್ ಅವರ ಕುಟುಂಬಕ್ಕೆ ಅವರ ಪತ್ನಿ ಪ್ರೇಮಾರವರ ಬ್ಯಾಂಕ್ ವಿಳಾಸ,

Name of the beneficiary : Smt. B. B. Prema.
Bank Account Number : 30424021947
Bank & Branch : State Bank of India ,
Madikeri -Kodagu District, Karnataka
IFSC Code of Branch :SBIN0000876

ಕ್ಕೆ ಇಂದು ರವಾನಿಸಿ ಆತ್ಮದ ಭಾರ ಇಳಿಸಿಕೊಂಡಿರುತ್ತೇನೆ.

ಸಹೃದಯಿ ಮಿತ್ರರೆಲ್ಲರೂ ತಮ್ಮ ತಮ್ಮ ಶಕ್ತ್ಯಾನುಸಾರ ಸಹಾಯ ಮಾಡಿದರೆ ದಿವಂಗತರನ್ನು ಅವಲಂಬಿತ ಕುಟುಂಬಕ್ಕೆ ಬದುಕುವ ಶಕ್ತಿ ನೀಡಿದಂತಾಗುತ್ತದೆ ಅಲ್ಲವೇ?

(ಸ್ಫೂರ್ತಿ, ಬಂಟಕಲ್ಲು)
ಶಾರ್ಜಾ, ಯು.ಏ.ಈ.
19-04-2013

Saturday, April 13, 2013

ಯುಗಾದಿ.

















ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ಆಶೆಯ ಹೊಸ ಭಾಷೆಯ
ಎತ್ತಿ ಹೊತ್ತು ತರುತಿದೆ.

ಹೊಸ ವರುಷದ ಹೊಸ ಬೆಳಕಿನ
ಹೊಸ ಕಿರಣವ ಪಸರಿಸುತ,
ಹಳೆ ಬೇವಿಗೆ ಹೊಸ ಚಿಗುರಲಿ
ಹೊಸ ಹೂವನು ಹಾಸುತ.

ಹೊಸ ಚಿಗುರಿನ ಮಾಮರದಲಿ
ಮಾಮಿಡಿಗಳು ಇಣುಕುತ,
ಹಲಸು ಹೆಬ್ಬಲಸುಗಳ
ಮರುಳು ಕಾಯಿ ಮಿನುಗುತ.

ಹೊನ್ನೆ ಹೊಂಗೆ ಹೂವು ಅರಳಿ
ಬಾವಲಿಗಳನು ನಗಿಸುತ
ಜೇನು ಗೂಡು ತುಂಬಿಕೊಂಡು
ಸಿಹಿಯ ಜಗಕೆ ನೀಡುತ.

ಆಲದ ಮರ ಹಣ್ಣು ತುಂಬಿ
ಕೋಗಿಲೆಗಳ ಸೆಳೆಯುತ
ಹಕ್ಕಿ-ಪಕ್ಕಿ ಕೂಡಿಕೊಂಡು
ಮರವ ಮುತ್ತಿ ನಗಿಸುತ.

ಕೇದಿಗೆಯ ಹೂವ ಕಂಪು
ನಾಡಿಗೆಲ್ಲ ಹಬ್ಬುತ
ಬೇಸಿಗೆಯ ಬಿಸಿಯ ಧಗೆಗೆ
ಮೋಡ ನೆರಳು ನೀಡುತ.


                                 ಸ್ಪೂರ್ತಿ,
                                  ಬಂಟಕಲ್ಲು.





Tuesday, April 2, 2013

ಎಚ್ಚರಿಕೆ!












 


ಚುನಾವಣೆಯ
ಮೊದಲು,
ರಾಜಕಾರಣಿಗಳ
ಪಾಪದ ಕೊಳೆ
ತೊಳೆಯಲು,
ಅಕಾಲಿಕವಾಗಿ
ಸುರಿದ ಮಳೆ,
ತೊಳೆದ
ಕೊಳೆಯನ್ನು
ಸಾಗಿಸಿದ್ದು
ಬಡವರ
ಗುಡಿಸಲುಗಳ
ಒಳಗೆ!
ಮತ್ತೇ,
ತುಂಡು ನೆಕ್ಕಿ
ಗುಂಡು ಹೀರಿ
ನೋಟಿನ ಕಂತೆ
ಜೇಬಿಗಿಳಿಸಿ
ಪಾಪದ ಕೊಡ
ತುಂಬದಿರಿ ಎಂದು!
                      

                       ಸ್ಪೂರ್ತಿ,
                       ಬಂಟಕಲ್ಲು