.jpg)
ಭಾರತದ ನಿತ್ಯ ಪಂಚಾಂಗವನ್ನು 21-12-2012ರ ವರೆಗೆ ನಕಲು ಮಾಡುವಾಗ ನಕಲುಗಾರ ಮಡಿದ.ಅವನ ನಕಲು ಕ್ಯಾಲೆಂಡರಿನ ಹಿಂಬಾಲಕರು 21-12-2012ರ ವರೆಗೆ ಮಾತ್ರ ಉಳಿಗಾಲ ಮತ್ತೆ ಪ್ರಳಯವಾಗಿ ಭೂಮಿ, ಮನುಕುಲ ಎಲ್ಲಾ ನಾಶವಾಗುತ್ತೆ ಎಂದು ನಂಬಿ, ಬದುಕುವ ಆಶೆ ಇದ್ದವರಿಗೂ ಜೀವ ಭಯ ತೋರಿಸಿ ನಲಿದಾಡಿ ಮೆರೆದರು! ಕೆಲವರು ಎತ್ತರದ ಗುಡ್ಡದಲೊಂದು ಅತೀ ಬೆಲೆ ಬಾಳುವ ಮನೆ ಖರಿದಿಸಿ ಉಳಿದುಕೊಂಡರು! ಇನ್ನು ಕೆಲವರು ಗುಂಡು ನಿರೋಧಕ ಕಂಟೈನರ್ನೋಳಗೊಂದು ಸುಸಜ್ಜಿತ ಮನೆಯ ಮಾಡಿ ಅವಿತುಕೊಂಡರು! ಮತ್ತೆ ಕೆಲವರು ದೇವಾ ಪ್ರಳಯದಿಂದ ಉಳಿಸೆಮ್ಮನು ಎಂದು ಬೇಡಿಕೊಂಡರು.
ನಮ್ಮ ದೇಶದ ನಿತ್ಯ ಪಂಚಾಂಗವನ್ನು ನಂಬುವವರು ಪ್ರತೀ ವರ್ಷ ದಶಂಬರ 21ಕ್ಕೆ ಉತ್ತರಾಯಣ (ಜೂನ್ 21ಕ್ಕೆ ದಕ್ಷಿಣಾಯಣ)ದ ಆರಂಭ ಎಂಬುದಾಗಿ ನಂಬಿ ಪವಿತ್ರ ಉತ್ತರಾಯಣದ ಸ್ವಾಗತಕ್ಕೆ ಮನೆ, ಮಠ, ಮದಿರಗಳ ಮುಂದೆ ರೋಗೊಲಿ ಬಿಡಿಸಿ ಉತ್ತರ್ರಯಣಕ್ಕೆ ಸ್ವಾಗತ ಕೋರಿದರು! ಇದು ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದಿನಿಂದ ನಂಬಿ ಆಚರಿಸುತ್ತಿರುವ ಪದ್ಧತಿ.
ಭಾರತೀಯ ಪಂಚಾಗವನ್ನು ಗೇಲಿ ಮಾಡುವ ಮಂದಿ ಅಮಾವಾಸ್ಯೆ, ಹುಣ್ಣಿಮೆ, ಗ್ರಹಣ ಇತ್ಯಾದಿ ನಿಗದಿತ ದಿನದಂದು ಗೋಚರಿಸುತ್ತದೆ ಎಂದು ಪ್ರಪಂಚದ ವಿಜ್ಞಾನಿಗಳಿಗೆ ತೋರಿಸಿದೆ ಎಂಬುದನ್ನು ಮರೆಯಬಾರದು. ಭಾರತೀಯರು ನಿಜವಾಗಿಯೂ ಈ ಬಗ್ಗೆ ಹೆಮ್ಮೆ ಪಡಬೇಕಾಗಿದೆ.
ಶ್ರೀನಿವಾಸ್ ಪ್ರಭು
ಸ್ಪೂರ್ತಿ
ಬಂಟಕಲ್ಲು
21-12-2012
No comments:
Post a Comment