Thursday, July 18, 2013

ರಾಜಕೀಯ!

 
ನನ್ನ ಬಾಯಿಯಿಂದ ಕೆಟ್ಟ ಶಬ್ದ ಬರುವುದಿಲ್ಲ. ಆದರೆ ಈ ಹೊಲಸು ರಾಜಕೀಯ, ಉಸಿರಾಡುವ ಗಾಳಿಯಲ್ಲಿಯೂ ಬೆರೆತು ಅತ್ತ ಉಸಿರಾಡಲೂ ಅಲ್ಲ ಇತ್ತ ಬಿಡಲೂ ಅಲ್ಲ ಎನ್ನುವಂತೆ ಮಾಡಿದೆ. ನೂರಾರು ವರ್ಷದ ಇತಿಹಾಸ ಇರುವ ನಮ್ಮ ತುಳುನಾಡಿನಲ್ಲಿ ಹುಟ್ಟಿ ಬೆಳೆದು ಬದುಕುತ್ತಿರುವ ನಮಗೂ ಕಾರ್ಡು ಬೇಕಾದರೆ ಒಬ್ಬ ಇಂಟ್ರೋಡ್ಯೂಸರ್ ಬೇಕಂತೆ. ಇದು ನಮ್ಮ ಸರಕಾರದ ಆದೇಶವಂತೆ. ಮುಂದೆ ನಾವು ಬದುಕಿದ್ದೇವೆ, ಜೀವಂತವಾಗಿದ್ದೇವೆ ಎನ್ನುವ ಸರ್ಟಿಫಿಕೇಟು ಕೇಳಿದರೂ ನಾವು ಬದುಕಿದ್ದೇವೆ ಅಂತ ಕೋರ್ಟಿನಲ್ಲಿ ವಾದಿಸಿ ಸರ್ಟಿಫಿಕೇಟು ಪಡೆಯಲು ನಮ್ಮ ಬದುಕು ಪೂರಾ ಸವೆದು, ಜೆವಂತ ಸಾಬೀತು ಸರ್ಟಿಫಿಕೇಟು ಮತ್ತು ಡೆತ್ ಸರ್ಟಿಫಿಕೇಟು ಒಟ್ಟಿಗೆ ನಮ್ಮ ಮಕ್ಕಳ ಕೈ ಸೇರಬಹುದೇನೋ ಅಲ್ವೇ!