ಪ್ರೇಮ ಪತ್ರ

ಪ್ರೇಮ ಕವಿಯ ಒಂದು ಕವನ
ಪ್ರೀತಿ ರಾಣಿ ಕೈಯ ಸೇರಿ
ಗಲ್ಲಿ ಗಲ್ಲಿಯಲ್ಲಿ
ಭಾರಿ ಸುದ್ದಿಯಾಯಿತು
ರಾದ್ದಾಂತವಾಯಿತು.
ನನ್ನ ರಾಣಿ ನೀನು ಚೆಂದ
ನಿನ್ನ ರಾಜ ನಾನು ಎಂದ
ಕವಿಯ ವಾಣಿ ಕೇಳಿ
ಜನರ ಕೋಪ ಉರಿಯಿತು.
ನೀನೊಂದು ಹೂವಿನಂತೆ
ಬರುವೆ ನಾನು ದುಂಬಿಯಂತೆ
ಎಂಬೆರಡು ಸಾಲು ಜನರ
ಕಿವಿಯ ತಟ್ಟಿತು.
ನಿನ್ನ ಹೃದಯ ಹಾಲಿನಂತೆ
ನನ್ನ ಹೃದಯ ಜೇನಿನಂತೆ
ಎಂಬ ಎರಡು ಕೊಂಡಿ ಅದಕೆ
ಸೇರಿಕೊಂಡಿತು.
ಪ್ರೇಮ ಕವಿಯ ಕವನ ಓದಿ
ಕಾವೇರಿ ಕುಪಿತ ಮಂದಿ
ದೊಳು ಗುದ್ದಿ ಜನರ
ಕಿವಿ ತಮಟೆ ಒಡೆದರು.
ಪ್ರೇಮ ಕವನ ಓದಿಕೊಂಡು
ಹದಿ ಹರೆಯ ಪುಳಕಗೊಂಡು
ಚಿಗುರುಮೀಸೆ ತಿರುವಿಕೊಂಡು
ತುಂಟರಾದರು!
ಕವಿಯ ಬಂಟರಾದರು.
ಸ್ಪೂರ್ತಿ
ಬಂಟಕಲ್ಲು
12.12.12
No comments:
Post a Comment