Sunday, January 24, 2016

ಗುಟುಕು ನೀರು


ನಂಬಿಕೆ ಅದು ಅವರವರ ವೈಯುಕ್ತಿಕ ವಿಷಯ. ತುಳು ನಾಡಿನ ಜನ ಮನೆ ಅಂಗಳದ ಅಂಚಿನಲ್ಲಿ ಪಾತ್ರೆ, ತೊಟ್ಟಿ, ಯಾ ಬಟ್ಟಲಲಿ ಅಥವಾ ತುಳಸಿ ಕಟ್ಟೆಯಲಿ ಒಂದು ತಂಬಿಗೆ ನೀರು ದಿನ ನಿತ್ಯ ಇಡುವ ಕ್ರಮವಿದೆ. ಯಾಕಂತ ಯಾರಲ್ಲಿ ಕೇಳಿದರೂ ಸರಿಯಾದ ಉತ್ತರ ಸಿಗುದಿಲ್ಲ. ಅದೇ ರೀತಿ ರಾತ್ರಿ ಮಲಗುವಾಗ ತಲೆಯ ಮೇಲ್ಭಾಗದಲ್ಲಿ ಕೈಗೆಟಕುವಂತೆ ಒಂದು ತಂಬಿಗೆ ನೀರು ಇಡುತ್ತಾರೆ. ನನ್ನ ಲೆಕ್ಕದಲ್ಲಿ ಇವೆರಡೂ ಕೇವಲ ಒಂದು ಗುಟುಕು ನೀರಿಗಾಗಿ. ನಂಬಿದರೆ ನಂಬಿ ಇಲ್ಲದಿದ್ದರೆ ಬಿಡಿ. ಒಂದು ಗುಟುಕು ನೀರು ಒಂದು ಜೀವ ಉಳಿಸೀತು!

ಪರ್ಯಾಯ