Friday, December 14, 2012

ಗುರು ಶಿಷ್ಯ ಸಂಬಂಧ



ಗುರು ಶಿಷ್ಯ ಸಂಬಂಧ







ಗುರು ಶಿಷ್ಯ ಸಂಬಂಧ
ಹೇಗೈತೆ ಕೇಳಯ್ಯಾ
ಕುಡಿಕೆ ಕುಂಬಾರ
ನಂತೈತೆ.

ಪ್ರಕೃತಿಯಲ್ಲಿರುವ
ಮಣ್ಣರಾಶಿಯ ತಂದು
ತಟ್ಟಿ ಮೆಟ್ಟಿ ಕುಟ್ಟಿ
ಇಟ್ಟಂತೈತೆ.

ಹಳಸಲು ಮಣ್ಣ
ಚಕ್ರದ ಮೇಲಿಟ್ಟು
ಗಿರ ಗಿರನೆ ತಿರುಗಿ
ಸುತ್ತಿದಂತೈತೆ.

ಸುತ್ತಿದ ಮಡಕೆಯ
ಚಕ್ರದಿಂದಿಳಿಸಿ
ಹದಗೋಲು ಹಿಡಿದು
ತಟ್ಟಿದಂತೈತೆ.

ದಿನ ದಿನಾ ತಟ್ಟಿ
ಮಡಕೆಯ ದಿಟ್ಟಿ
ಸುಂದರ ಸುಂದರ
ಆಗೈತೆ.

ಸುಂದರ ಮಡಕೆಯ
ಅಗ್ನಿ ಕುಂಡದಲಿಲಿಟ್ಟು
ಒಳಿತಾ ಕೆಡುಕಾ
ನೋಡೈತೆ.

ಒಳಿತಾದ ಮಡಕೆಯ
ಸಂತೆಗೆ ಒಯ್ದಾಗ
ಮಡಕೆಯ ಬೆಲೆಯು
ಬಂದೈತೆ.

                    ಸ್ಪೂರ್ತಿ
                    ಬಂಟಕಲ್ಲು

(ಈ ಕವನವನ್ನು ನಾನು ನನ್ನ ಪೂಜ್ಯ ಗುರುವರ್ಯರಾದ ಶ್ರೀ ರಾಧಾಕೃಷ್ಣ ಪ್ರಭುರವರಿಂದ ಸ್ಫೂರ್ತಿ ಪಡೆದು 7ನೇ ತರಗತಿಯಲ್ಲಿರುವಾಗ ರಚಿಸಿದ್ದೆ. ಸುಮಾರು 6ವರ್ಷಗಳ ನಂತರ ಯಂ.ಅರ್.ಯಸ್.ಕಾಲೇಜಿನ ಸೃಜನಾ ಫಲಕದಲ್ಲಿ ಬೆಳಕು ಕಂಡು ಕಾ.ವಾ.ಆಚಾರ್ಯರ ಪ್ರೋತ್ಸಾಹದೊಂದಿಗೆ 1987ರಲ್ಲಿ ಮೈಸೂರಿನಲ್ಲಿ ಬಿಡುಗಡೆಯಾದ " ನೂರು ಕವಿಗಳು ನೂರು ಕವನಗಳು" ಎಂಬ ಕವನ ಸಂಕಲನದಲ್ಲಿ ಪ್ರಕಟವಾಗಿತ್ತು. ಇದೀಗ ನನ್ನ ಈ ಚೊಚ್ಚಲ ಕವನಕ್ಕೆ ಇಪ್ಪತ್ತೈದರ ಸಂಭ್ರಮ - ಶ್ರೀನಿವಾಸ್ ಪ್ರಭು, 12-12-2012)
 

1 comment:

  1. ಕವಿತೆ ಅರ್ಥಗರ್ಭಿತವೂ, ಉಪಮೆಗಳು ವಸ್ತುವಿನ ಪ್ರತಿಮೆಯನ್ನು ಎತ್ತಿ ನಿಲ್ಲಿಸುವಲ್ಲಿ ಸಮರ್ಥವಾಗಿದೆ. ಇದು ನೀವು ಏಳನೇ ತರಗತಿಯಲ್ಲಿದ್ದಾಗ ಬರೆದದ್ದು ಎಂಬುದನ್ನು ತಿಳಿದು ಆಶ್ಚರ್ಯವಾಯ್ತು. ಕವಿತೆ ಮುಗ್ಧವಾಗಿದ್ದರೂ ಆ ಉಪಮೆಗಳನ್ನು ಆ ವಯಸ್ಸಿನಲ್ಲೇ ಹೆಕ್ಕಿರುವುದು ಸೋಜಿಗವೆನಿಸುತ್ತದೆ.
    ಪ್ರಕಟವಾಗಿರುವುದು ಎಂದಮೇಲೆ ಅಲ್ಲಿ ಅಕ್ಷರದೋಷಗಳಿರುವುದಿಲ್ಲ ಎಂದು ಭಾವಿಸುತ್ತೇನೆ.
    ಹೆಗೈತೆ = ಹೇಗೈತೆ?
    ಸುತ್ತಿತಂತೈತೆ = ಸುತ್ತಿದಂತೈತೆ?
    ತಟ್ಟಿತಂತೈತೆ = ತಟ್ಟಿದಂತೈತೆ?

    ReplyDelete