ಚಿಮಿಣಿ ದೀಪ
ಹುಲ್ಲು ಛಾವಣಿ ಹೊತ್ತ
ಮೆತ್ತಗಿನ ಮನೆಯಲ್ಲಿ
ನಿನ್ನದೇ ಬೆಳಕಿನಲ್ಲಿ
ಹುಟ್ಟಿ ಬೆಳೆದಿರುವೆನು.
ಓದಿರುವೆ ಬರೆದಿರುವೆ
ಆಡಿರುವೆ ಕುಣಿದಿರುವೆ
ನಿನ್ನದೇ ಬೆಳಕಿನಲ್ಲಿ
ಬೆಳೆದು ನಿಂತಿರುವೆನು.
ಹಗಲಿನಲ್ಲಿ ರಾತ್ರಿಯಲ್ಲಿ
ಮಳೆಯಿರಲಿ ಬಿಸಿಲಿರಲಿ
ನಿನ್ನದೇ ಬೆಳಕಿನಲ್ಲಿ
ಬದುಕಿ ಬಾಳಿರುವೆನು.
ಬೆತ್ತಲ ದಿನದಿಂದ
ಕತ್ತಲ ದಾರಿಯಲ್ಲಿ
ನಿನ್ನದೇ ಬೆಳಕಿನಲ್ಲಿ
ಸಾಗಿ ಬಂದಿರುವೆನು.
ಸ್ಫೂರ್ತಿ
ಬಂಟಕಲ್ಲು
No comments:
Post a Comment