Friday, February 16, 2018

ಕೃಷಿರಂಗಕ್ಕೆ ಉದ್ಯಮದ ಸ್ಥಾನ ಮಾನ.


ದೇಶದಲ್ಲಿ ಉದ್ಯೋಗ ಹೆಚ್ಚಳ ಹಾಗೂ ರೈತ ಆತ್ಮ ಹತ್ಯೆ ನಿಲ್ಲಿಸಲು, ಕೃಷಿ ಕ್ಷೇತ್ರಕ್ಕೆ ಉದ್ಯಮದ ಸ್ಥಾನ ಮಾನ ಕೊಟ್ಟು, ಬೆಲೆ ಕೃಷಿ ಉದ್ಯಮಿಗಳೇ ನಿಗದಿ ಮಾಡುವಂತಾಗಬೇಕು.ಆಗ ಭಾರತ ಸದೃಢವಾಗಿ ಬೆಳೆಯುತ್ತೆ.

Saturday, January 27, 2018

ಆಚಾರ್ಯ ಚಾಣಕ್ಯರ ನೀತಿ ಸೂತ್ರಗಳು



  • ನಮಗೆ ಗೌರವ, ಮರ್ಯಾದೆ ಇಲ್ಲದ ಸ್ಥಳದಲ್ಲಿ ಒಂದು ಕ್ಷಣವೂ ಇರಬಾರದು. ಹಾಗೆ ನಮಗೆ ಗೌರವ ನೀಡದವರ ಮುಂದೆ ಸಹ ಇರಬಾರದು. ಸಂಪಾದನೆ ಇಲ್ಲದ ಕಡೆಯೂ ಸಮಯ ಕಳೆಯಬಾರದು.
  • ನದಿಗಳು, ವೈದ್ಯರು ಇರುವ ಪ್ರದೇಶಗಳಲ್ಲಿ ಮಾತ್ರ ಜೀವಿಸಬೇಕು. ಅವು ವಾಸಿಸಲು ಸೂಕ್ತ ಸ್ಥಳಗಳು ಎಂಬುದು ಚಾಣಕ್ಯನ ಆಂಬೋಣ.
  • ಧನವಂತರು ವಾಸಿಸುವ ಕಡೆ ಇದ್ದರೆ ಧನ, ಜ್ಞಾನಿಗಳು ಇರುವ ಕಡೆ ಇದ್ದರೆ ಜ್ಞಾನ ಬರುತ್ತದಂತೆ.
  • ಕಣಿವೆಯಲ್ಲಿ ನೀರಿದ್ದಾಗ ಮಾತ್ರ ವಾಸಿಸಿ, ನೀರು ಖಾಲಿಯಾದ ಮೇಲೆ ತಮ್ಮ ಆವಾಸ ಸ್ಥಾನ ಬದಲಾಯಿಸುವ ಹಂಸ ಪಕ್ಷಿಗಳಂತೆ ಮಾನವರು ಜೀವಿಸಬೇಕು.
  • ಗಲಾಟೆಗಳು ಇಲ್ಲದ, ಆಹಾರ ಪದಾರ್ಥಗಳು ಹೆಚ್ಚು ಉಳಿಕೆಯಾಗುವ, ನೀರು ಇರುವ ಪ್ರದೇಶಗಳಲ್ಲಿ ಮಾತ್ರ ಹೆಚ್ಚು ಹಣ ಸಂಪತ್ತು ಇರುತ್ತದೆಯಂತೆ.
  • ಒಬ್ಬ ವ್ಯಕ್ತಿಯನ್ನು ಹತ್ತು ಜನ ಹೊಗಳಿದರೆ ನಾವೂ ಅವರನ್ನು ಹೊಗಳಬೇಕಂತೆ. ಆದರೆ ತಾವೇ ಯಾರನ್ನೂ ಹೊಗಳಬಾರದು.
  • ಇದ್ದಿದ್ದರಲ್ಲೇ ಜೀವಿಸುವುದರಿಂದ ನಿಜವಾದ ಆನಂದ ಸಿಗುತ್ತದೆಯಂತೆ.
  • ಮಾನವರು ತಮ್ಮ ಎದುರಿನ ವ್ಯಕ್ತಿಯ ಕಷ್ಟಗಳನ್ನು ನೊಡಿ ಸಹಾಯ ಮಾಡದಿದ್ದರೆ ಅವರು ಬದುಕಿ ಸತ್ತಂತೆ.
  • ಸದಾ ಗೆಲುವು ಸಾಧಿಸುತ್ತಿರುವವರನ್ನು ಆದರ್ಶವಾಗಿಟ್ಟುಕೊಂಡರೆ ಅಥವಾ ಅಂತಹವರ ಕುರಿತ ಕಥೆಗಳು ಓದಬೇಕು. ಇದರಿಂದ ಸ್ಫೂರ್ತಿಗೊಂಡು ನಾವು ಜಯಗಳಿಸುತ್ತೇವೆ.
  • ಜೀವನದಲ್ಲಿ ಸಿಗುವ ಯಾವ ಅವಕಾಶಗಳನ್ನೂ ಬಿಡಬಾರದಂತೆ. ಯಾರ ಜೀವನ ಎಲ್ಲಿ ಬದಲಾಗುತ್ತದೋ ಯಾರಿಗೂ ತಿಳಿದಿಲ್ಲವೆ.
ಆಧ್ಯಾತ್ಮಿಕದಿಂದ.