- ನಮಗೆ ಗೌರವ, ಮರ್ಯಾದೆ ಇಲ್ಲದ ಸ್ಥಳದಲ್ಲಿ ಒಂದು ಕ್ಷಣವೂ ಇರಬಾರದು. ಹಾಗೆ ನಮಗೆ ಗೌರವ ನೀಡದವರ ಮುಂದೆ ಸಹ ಇರಬಾರದು. ಸಂಪಾದನೆ ಇಲ್ಲದ ಕಡೆಯೂ ಸಮಯ ಕಳೆಯಬಾರದು.
- ನದಿಗಳು, ವೈದ್ಯರು ಇರುವ ಪ್ರದೇಶಗಳಲ್ಲಿ ಮಾತ್ರ ಜೀವಿಸಬೇಕು. ಅವು ವಾಸಿಸಲು ಸೂಕ್ತ ಸ್ಥಳಗಳು ಎಂಬುದು ಚಾಣಕ್ಯನ ಆಂಬೋಣ.
- ಧನವಂತರು ವಾಸಿಸುವ ಕಡೆ ಇದ್ದರೆ ಧನ, ಜ್ಞಾನಿಗಳು ಇರುವ ಕಡೆ ಇದ್ದರೆ ಜ್ಞಾನ ಬರುತ್ತದಂತೆ.
- ಕಣಿವೆಯಲ್ಲಿ ನೀರಿದ್ದಾಗ ಮಾತ್ರ ವಾಸಿಸಿ, ನೀರು ಖಾಲಿಯಾದ ಮೇಲೆ ತಮ್ಮ ಆವಾಸ ಸ್ಥಾನ ಬದಲಾಯಿಸುವ ಹಂಸ ಪಕ್ಷಿಗಳಂತೆ ಮಾನವರು ಜೀವಿಸಬೇಕು.
- ಗಲಾಟೆಗಳು ಇಲ್ಲದ, ಆಹಾರ ಪದಾರ್ಥಗಳು ಹೆಚ್ಚು ಉಳಿಕೆಯಾಗುವ, ನೀರು ಇರುವ ಪ್ರದೇಶಗಳಲ್ಲಿ ಮಾತ್ರ ಹೆಚ್ಚು ಹಣ ಸಂಪತ್ತು ಇರುತ್ತದೆಯಂತೆ.
- ಒಬ್ಬ ವ್ಯಕ್ತಿಯನ್ನು ಹತ್ತು ಜನ ಹೊಗಳಿದರೆ ನಾವೂ ಅವರನ್ನು ಹೊಗಳಬೇಕಂತೆ. ಆದರೆ ತಾವೇ ಯಾರನ್ನೂ ಹೊಗಳಬಾರದು.
- ಇದ್ದಿದ್ದರಲ್ಲೇ ಜೀವಿಸುವುದರಿಂದ ನಿಜವಾದ ಆನಂದ ಸಿಗುತ್ತದೆಯಂತೆ.
- ಮಾನವರು ತಮ್ಮ ಎದುರಿನ ವ್ಯಕ್ತಿಯ ಕಷ್ಟಗಳನ್ನು ನೊಡಿ ಸಹಾಯ ಮಾಡದಿದ್ದರೆ ಅವರು ಬದುಕಿ ಸತ್ತಂತೆ.
- ಸದಾ ಗೆಲುವು ಸಾಧಿಸುತ್ತಿರುವವರನ್ನು ಆದರ್ಶವಾಗಿಟ್ಟುಕೊಂಡರೆ ಅಥವಾ ಅಂತಹವರ ಕುರಿತ ಕಥೆಗಳು ಓದಬೇಕು. ಇದರಿಂದ ಸ್ಫೂರ್ತಿಗೊಂಡು ನಾವು ಜಯಗಳಿಸುತ್ತೇವೆ.
- ಜೀವನದಲ್ಲಿ ಸಿಗುವ ಯಾವ ಅವಕಾಶಗಳನ್ನೂ ಬಿಡಬಾರದಂತೆ. ಯಾರ ಜೀವನ ಎಲ್ಲಿ ಬದಲಾಗುತ್ತದೋ ಯಾರಿಗೂ ತಿಳಿದಿಲ್ಲವೆ.
ಆಧ್ಯಾತ್ಮಿಕದಿಂದ.
No comments:
Post a Comment