Saturday, April 13, 2013

ಯುಗಾದಿ.

















ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ಆಶೆಯ ಹೊಸ ಭಾಷೆಯ
ಎತ್ತಿ ಹೊತ್ತು ತರುತಿದೆ.

ಹೊಸ ವರುಷದ ಹೊಸ ಬೆಳಕಿನ
ಹೊಸ ಕಿರಣವ ಪಸರಿಸುತ,
ಹಳೆ ಬೇವಿಗೆ ಹೊಸ ಚಿಗುರಲಿ
ಹೊಸ ಹೂವನು ಹಾಸುತ.

ಹೊಸ ಚಿಗುರಿನ ಮಾಮರದಲಿ
ಮಾಮಿಡಿಗಳು ಇಣುಕುತ,
ಹಲಸು ಹೆಬ್ಬಲಸುಗಳ
ಮರುಳು ಕಾಯಿ ಮಿನುಗುತ.

ಹೊನ್ನೆ ಹೊಂಗೆ ಹೂವು ಅರಳಿ
ಬಾವಲಿಗಳನು ನಗಿಸುತ
ಜೇನು ಗೂಡು ತುಂಬಿಕೊಂಡು
ಸಿಹಿಯ ಜಗಕೆ ನೀಡುತ.

ಆಲದ ಮರ ಹಣ್ಣು ತುಂಬಿ
ಕೋಗಿಲೆಗಳ ಸೆಳೆಯುತ
ಹಕ್ಕಿ-ಪಕ್ಕಿ ಕೂಡಿಕೊಂಡು
ಮರವ ಮುತ್ತಿ ನಗಿಸುತ.

ಕೇದಿಗೆಯ ಹೂವ ಕಂಪು
ನಾಡಿಗೆಲ್ಲ ಹಬ್ಬುತ
ಬೇಸಿಗೆಯ ಬಿಸಿಯ ಧಗೆಗೆ
ಮೋಡ ನೆರಳು ನೀಡುತ.


                                 ಸ್ಪೂರ್ತಿ,
                                  ಬಂಟಕಲ್ಲು.





No comments:

Post a Comment