
(ಚಿತ್ರ:ವೆಬ್ ಕೃಪೆ.)
ಹೆಂಡ್ತಿ
*****
ಹೆಂಡ
ಕುಡಿಯಲು
ದುಡಿದು
ತಂದು
ಕೊಡುವವಳು!
ಧರ್ಮ ಪತ್ನಿ
********
ದುಡಿದು
ದ(ಧ)ರ್ಮದ
ಅನ್ನ
ಹಾಕುವವಳು!
ಅರ್ಧಾಂಗಿ
********
ದುಡಿದು ತಂದು
ಹೆಂಡ ಕುಡಿಸಿ
ದ(ಧ)ರ್ಮದ
ಅನ್ನದೊಟ್ಟಿಗೆ
ತನ್ನರ್ಧಾಂಗವನ್ನು
ಹಂಚಿಕೊಳ್ಳುವವಳು!
ಮಡದಿ
******
ಗಂಡ
ದಯಾಪಾಲಿಸಿದ
ಮಕ್ಕಳ ಹಡೆದು
ದುಡಿದು
ಸಾಕುವವಳು!
ಸತಿ
*****
ಸವತಿಯೊಟ್ಟಿಗೆ
ಸವೆದು
ಗಂಡನ
ಪೋಷಣೆ ಮಾಡಿ
ಕೂಡಿ
ಬಾಳುವವಳು!
ಭಾರ್ಯೆ
******
ಗಂಡನ
ಕಾಟ,
ಸವತಿಯ
ಕೂಟದ
ಭಾರ
ತಾಳಲಾರದೆ
ಅರಕ್ಷಕರಲ್ಲಿ
ದೂರು ನೀಡಿ
ನ್ಯಾಯ
ಕೆಳುವವಳು!
ಸ್ಪೂರ್ತಿ
ಬಂಟಕಲ್ಲು.
08.03.2013
No comments:
Post a Comment