ನಿಗೂಢ ಸೃಷ್ಟಿ
ಕಾಮನ ಬಿಲ್ಲಿಂದ
ಹೊರಟ ಹೊಂಬಾಣ
ಕತ್ತಲ ಗವಿಯೊಳಗೆ
ಜಾರು ದಾರಿಯಲ್ಲಿ ಜಾರಿ
ನಿರ್ಧಿಷ್ಠ ಗುರಿಯೆಡೆಗೆ
ಗುರಿ ಇಟ್ಟಂತೆ ಮುಟ್ಟಿ
ಆಸ್ಫೋಟಗೊಂಡು
ತಣಿದಿರಲು –
ಗವಿಗರ್ಭದ ಪಿಂಡದೊಳ್
ಬೆಳಕೊಂದು ಕಣ್ತೆರೆದು
ಸೃಷ್ಟಿಗೊಂದು
ಪುಷ್ಟಿ ಇಟ್ಟಿದೆ!
ಸ್ಫೂರ್ತಿ
ಬಂಟಕಲ್ಲು.
ಹೊರಟ ಹೊಂಬಾಣ
ಕತ್ತಲ ಗವಿಯೊಳಗೆ
ಜಾರು ದಾರಿಯಲ್ಲಿ ಜಾರಿ
ನಿರ್ಧಿಷ್ಠ ಗುರಿಯೆಡೆಗೆ
ಗುರಿ ಇಟ್ಟಂತೆ ಮುಟ್ಟಿ
ಆಸ್ಫೋಟಗೊಂಡು
ತಣಿದಿರಲು –
ಗವಿಗರ್ಭದ ಪಿಂಡದೊಳ್
ಬೆಳಕೊಂದು ಕಣ್ತೆರೆದು
ಸೃಷ್ಟಿಗೊಂದು
ಪುಷ್ಟಿ ಇಟ್ಟಿದೆ!
ಸ್ಫೂರ್ತಿ
ಬಂಟಕಲ್ಲು.
ಸೃಷ್ಟಿಯ ರಹಸ್ಯವನ್ನು ಬಿಡಿಸಿಟ್ಟ ಬಗೆ ತುಂಬಾ ಸೊಗಸಾಗಿದೆ.. ನಿಮ್ಮ ಪದಗಳೊಂದಿಗಿನ ಲಾಸ್ಯ ಇಷ್ಟವಾಯ್ತು..:)
ReplyDelete