ಮಳೆಗಾಲ ಬಂದಿದೆ. ಹಿಂದೆಯೂ ಬಂದಿತ್ತು ಮುಂದೆಯೂ ಬರುತ್ತದೆ. ಆದರೆ ಕತೆ ಮಳೆಯದ್ದಲ್ಲ. ಬೇಸಿಗೆಯಲ್ಲಿ ಕೊಡ ಹಿಡಿದು ಸರಕಾರದ ಮುಂದೆ ಧರಣಿಗೆ ಕುಳಿತುಕೊಳ್ಳುವ ಆದುನಿಕ ಮಾನವನ ಮೂಢತೆಯ ಮೂರ್ಖತೆ. ನಮ್ಮಲ್ಲಿ ನೂರೈವತ್ತು ಕೋಟಿ ಜನರಿದ್ದಾರೆ. ಈ ನೂರೈವತ್ತು ಕೋಟಿ ಜನರಲ್ಲಿ ಸುಮಾರು ಅರ್ಧದಷ್ಟು ಜನರು ವರುಣನು ಪುಕ್ಕಟೆಯಾಗಿ ಸುರಿದ ಮಳೆಯಿಂದ ಹಿಡಿದು ಒಂದೊಂದು ಕೊಡಪಾನ ನೀರನ್ನು ಭೂಮಿಯ ಒಳಗೆ ಸುರಿದು ಬಿಟ್ಟರೆ......, ಪ್ರತೀ ಶಾಲೆಯ ಮಕ್ಕಳು ಪ್ರತೀ ದಿನ ಮಳೆಗಾಲದಲ್ಲಿ ಒಂದೊಂದು ಕೊಡಪಾನ ನೀರನ್ನು ಭೂ ಒಡಲಿಗೆ ಸೇರಿಸುವ ಪುಣ್ಯದ ಪಾಠ ಕಲಿತು ಬಿಟ್ಟರೆ...., ಪ್ರತೀ ಪಟ್ಟಣ, ಹಳ್ಳಿಗಳಲ್ಲಿ ಹರಿದು ಹೋಗುವ ಮಳೆನೀರು ಇಳೆಗೆ ಸೇರಿಸುವ ಕಾರ್ಯದಲ್ಲಿ ತೊಡಗಿಸಿ ಕೊಂಡರೆ... ಖಂಡಿತಾ ಕೊಡ ಹಿಡಿದು ಸರಕಾರಿ ಬಾಗಿಲ ಮುಂದೆ ನಿಲ್ಲುವ ಪ್ರಮೇಯವೇ ಇರಲಿಕ್ಕಿಲ್ಲ. ಬದಲಾಗಿ ಇಡೀ ಪ್ರಪಂಚವೇ ನಮ್ಮತ್ತ ಕಣ್ಣು ಮಿಟಿಕಿಸಿ ನೋಡುವಂತಾಗಬಹುದು. ಕೋಟಿ ಕೋಟಿ ಹಣ ಸುರಿದು ಖಜಾನೆ ಬರಿದು ಮಾಡುವ ಬದಲು ಕೇವಲ ಶಾಲಾ ಮಕ್ಕಳಿಂದ ಹಾಗೂ ರೈತರಿಂದ ಸಹಾಯ ಧನ ಒದಗಿಸಿ ಈ ಕೈಂಕರ್ಯ ಮಾಡಿಸಬಹುದು. ರೈಲು ತಡೆ, ರಸ್ತೆ ತಡೆ, ಆ ತಡೆ, ಈ ತಡೆ ಮಾಡುವ ಬದಲು ಹರಿಯುವ ನೀರಿನ ತಡೆ ಮಾಡಿದರೆ ಏಷ್ಟೋ ಜನರ ಗಂಟಲು ಪಸೆಯಾಗಬಹುದಲ್ಲವೇ? ನಾವು ಭಾರತೀಯರು. ಮರೆತ ಸಂಸ್ಕಾರ ಮತ್ತೊಮ್ಮೆ ಕಲಿತು ಕಲಿಸಿ ಮುಂದುವರಿಸುವ ಅಗತ್ಯತೆ ಇದೆ ಎಂದು ಭಾವಿಸುತ್ತಿಲ್ಲವೇ?
ಇನ್ನಾದರೂ ನಾವು ಕಣ್ಣು ತೆರೆಯುವ ಅವಶ್ಯಕತೆ ಬಂದಿದೆ.
ReplyDelete