Saturday, March 1, 2014

ದಾರು ಶಿಲ್ಪ.


ದಶಾವತಾರ

ಕಳೆದ ವರ್ಷದ ರಜೆಯಲ್ಲಿ ಊರಿಗೆ ಹೋದಾಗ (2013) ಕಾರ್ಕಳ ತಾಲೂಕಿನ ನಕ್ರೆಯಲ್ಲಿರುವ ನಮ್ಮ ಸಂಬಂದಿಕರೊಬ್ಬರ ಮನೆ ಒಕ್ಕಲಿಗೆ ಹೋಗಿದ್ದೆ ಕಲ್ಲು ಗುಡ್ಡ ದಾಟಿ, ಕಾಡು ಮೆಡು ಏರಿ, ನದಿ ತೊರೆ ದಾಟಿ, ಮುನ್ನಡೆದಾಗ ಪ್ರಶಾಂತವಾದ ಹಳ್ಳಿಯ ವಾತಾವರಣದಲ್ಲಿ ಕಟ್ಟಿದ್ದರು ಹೊಸ ಮನೆ. ಮನೆ ಎದುರು ಕಾಡು, ಮೂಡು, ಪಡು, ತೆಂಕು ಚಕಬಂದಿಗಳಲ್ಲಿ ಭತ್ತದ ಗದ್ದೆಗಳು. ಹುಲುಸಾಗಿ ಬೆಳೆದು ನಿಂತ ಭತ್ತದ ಸುಂದರ ನೋಟ, ನಡುವೆ ಹಸಿರ ಹೊದಿಸಿದ ಕಾಲು ದಾರಿ ಏರುಗಳು, ಬಾಳೆ, ತೆಂಗು, ಕಂಗು, ತರಕಾರಿ ತೋಟದ ಮನಮೋಹಕ ದೃಶ್ಯ ಕಂಡು ಆದ ಸಂತೋಷಕ್ಕೆ ಮಿತಿ ಇರಲಿಲ್ಲ.

ಇಂತಹ ಸುಂದರ ಪರಿಸರದಲ್ಲಿ ಚಿಕ್ಕ ಚೊಕ್ಕದಾಗಿ ಕಟ್ಟಿದ ಹೊಸ ಮನೆ ಹೊಸ ವಿನ್ಯಾಸದಿಂದ ಕೂಡಿತ್ತು. ಅದರಲ್ಲಿ ಮುಖ್ಯವಾಗಿ ನನ್ನ ಗಮನ ಸೆಳೆದದ್ದು  ದೇವರ ಕೋಣೆಯ ಬಾಗಿಲಿನತ್ತ. ಸುಂದರವಾದ ದಾರೂ ಶಿಲ್ಪದಿಂದ ಕೆತ್ತಲ್ಪಟ್ಟ ಈ ಬಾಗಿಲಿನ ಚೌಕಟ್ಟು ಕಂಡಾಗ ಭಜನೆಯ ಕೊನೆಯಲ್ಲಿ ಹಾಡುವ ಮಂಗಳದ ನೆನಪಾಯಿತು. ಅದೇ ದಶಾವರಾರದ ವರ್ಣನೆ. (ಚಿತ್ರದಲ್ಲಿ ನೋಡಿ)





ದಶಾವತಾರ
ಜಾಗತಿಕ ಸಂರಕ್ಷಣೆಯ ಹಿಂದೂ ದೇವತೆಯಾದ ವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ. ವಿಷ್ಣುವು ದುಷ್ಟ ಶಕ್ತಿಗಳನ್ನು ನಿರ್ಮೂಲನೆ ಮಾಡಲು, ಧರ್ಮವನ್ನು ಪುನಃಸ್ಥಾಪಿಸಲು, ಹಾಗು ಅರ್ಹರನ್ನು ಅಥವಾ ಭಕ್ತರನ್ನು ಹುಟ್ಟು ಮತ್ತು ಸಾವುಗಳ ಚಕ್ರದಿಂದ ಮುಕ್ತಗೊಳಿಸಲು ಕಾಲಕಾಲಕ್ಕೆ ಭೂಮಿಯ ಮೇಲೆ ಅವತರಿಸುತ್ತಾನೆ. ಈ ಪಟ್ಟಿಯಲ್ಲಿನ ಅವತಾರಗಳನ್ನು ಲೀಲಾ ಅವತಾರಗಳೆಂದೂ ವಿವರಿಸಲಾಗುತ್ತದೆ. ಕೆಳಗಿನ ಹತ್ತು ನಾಮಾವಲಿಗಳೇ ದಶಾವತಾರದ ಸ್ವರೂಪಗಳು.
  1. ಮತ್ಸ್ಯ
  2. ಕೂರ್ಮ
  3. ವರಾಹ
  4. ನರಸಿಂಹ
  5. ವಾಮನ
  6. ಪರಶುರಾಮ
  7. ರಾಮ 
  8. ಕೃಷ್ಣ 
  9. ಬುದ್ಧ 
  10. ಕಲ್ಕಿ
ಈಗ ಮರ ಮಟ್ಟು ತುಂಬಾ ದುಬಾರಿಯಾದ್ದರಿಂದ ದಾರು ಶಿಲ್ಪ ಕಡಿಮೆಯಾಗುತ್ತಿದೆ. ಹಾಗಾಗಿ ಶಿಲ್ಪಿಗಳೂ ಕಡಿಮೆಯಾಗುತ್ತಿದ್ದಾರೆ. ಎಲ್ಲದ್ದಕ್ಕೂ ನಾವು  ಇಂದು ಯಂತ್ರಗಳ ಮೊರೆ ಹೋಗಿ ಮುಂದೊಂದು ದಿನ ಕರ ಕೌಶಲ ಎಂಬ ಪದ ಕೇವಲ ನಿಘಂಟಿನಲ್ಲಿ ನೋಡುವಂತೆ ಆದೀತು. ವಿಶ್ವಕರ್ಮನ ಸೃಷ್ಟಿ ನಾವು ಉಳಿಸಿ ಬೆಳೆಸ ಬೇಕಾಗಿದೆ.


ಸ್ಪೂರ್ತಿ,
ಬಂಟಕಲ್ಲು.



No comments:

Post a Comment