Saturday, January 18, 2014

ಅವಾಂತರ!


ನಮ್ಮ ಬಂಟಕಲ್ಲಿನ ಹಿಂದಿನ ತಲೆಮಾರಿನ ಕ್ರಿಶ್ಚಿಯನ್ ಹಿರಿಯರು ತುಂಬಾ ಹಾಸ್ಯ ಪ್ರಿಯರು. ಅವರ ಪ್ರತಿಯೊಂದು ಮಾತಿನಲ್ಲಿಯೂ ಒಂದಿಷ್ಟು ಹಾಸ್ಯ ಇಲ್ಲದೆ ಇರುತ್ತಿರಲಿಲ್ಲ. ಹಾಗಾಗಿ ಬಂಟಕಲ್ಲಿನಲ್ಲಿ ನಡೆಯುವ ಪ್ರತಿಯೊಂದು ನಾಟಕದಲ್ಲಿ ಸ್ಥಳೀಯ ಕೆಲವರ ಹೆಸರು ಹೇಳಿ ಹಾಸ್ಯ ಮಾಡದಿದ್ದರೆ ಆ ನಾಟಕಕ್ಕೆ ಕಳೆಯೇ ಇರುತ್ತಿರಲಿಲ್ಲ. ಮುಖ್ಯವಾಗಿ ಮರೆಯಲಾರದ ಕೆಲವು ಹೆಸರುಗಳೆಂದರೆ -  ದಾಯಿದ ಪರ್ಬುಲು, ಉಬ್ಬು ಪರ್ಬುಲು, ಬಲ್ತು ಪರ್ಬುಲು, ಪೆದ್ರು ಪರ್ಬುಲು, ಲಾದ್ರು ಪರ್ಬುಲು, ಮಾರ್ಶಲ ಪರ್ಬುಲು, ಮೇರಿ ಬಾಯಿ, ತೆರೆಜಾ ಬಾಯಿ ಹೀಗೆ ಹೆಸರುಗಳ ಒಂದು ದೊಡ್ಡ ಪಟ್ಟಿಯೇ ಇದೆ. ಇವರುಗಳ ಬಾಯಿಯಿಂದ ಯಾವತ್ತೂ ಕಾಲ್ಪನಿಕ ಹಾಸ್ಯ ಬರುತ್ತಿರಲಿಲ್ಲ. ನೈಜ್ಯ ವಾಸ್ತವಿಕ ಹಾಸ್ಯವೇ ಇವರ ಬಾಳಿನ ಅವಿಭಾಜ್ಯ ಅಂಗವಾಗಿತ್ತು. ಅವರ ನೀಳ ದೇಹ, ದೊಡ್ಡ ಮೀಸೆ ಈ ಹಾಸ್ಯಕ್ಕೆ ಸಾಥ್ ಕೊಡುತ್ತಿತ್ತು. ಒಂದು ದಿನ ಬಂಟಕಲ್ಲಿನ ಒಂದು ಮನೆಯಲ್ಲಿ ದೊಡ್ಡ ಕಳ್ಳತನ ನಡೆದಿತ್ತು ಹಾಗೂ ಮೊದಲ ಭಾರಿಗೆ ಪೋಲಿಸ್ ನಾಯಿ ಕರೆ ತರಲಾಗಿತ್ತು. ಅದರ ನೆನಪು ಇನ್ನೂ ಮರೆಯಲಾಗಲಿಲ್ಲ. ಆ ದಿನ ನಡೆದ ಒಂದು ಚಿಕ್ಕ ಹಾಸ್ಯ ಪ್ರಸಂಗ ಚುಟುಕು ರೂಪದಲ್ಲಿ.......

1 comment:

  1. ಬಂಟಕಲ್ಲಿನ ನಾಟಕಗಳ ವೈಶಿಷ್ಟ್ಯತೆ ವಿಭಿನ್ನವಾಗಿದೆ. ಸಾಧ್ಯವಾದರೆ ಯಾವತ್ತಿಗಾದರೂ ಅಂತ ನಾಟಕವನ್ನು ಮೊಬೈಲಿನಲ್ಲಿ ಚಿತ್ರೀಕರಿಸಿ, ನಮಗಾಗಿ ಇಲ್ಲಿ ನೀಡಿರಿ.
    ನಾಯಿ - ಮೇರಿ ಬಾಯಿ ಹ್ಹ ಹ್ಹ ಹ್ಹ...

    ReplyDelete