ಸಣ್ಣ ಕತೆ.
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಒಬ್ಬ ಯುವಕನಿದ್ದ.
ಅವನ ಹೆಸರು ಎಕ್ಸ್. ಹದಿ ಹರೆಯದ ಅವನು ತುಂಬಾ ಹೆಣ್ಣು ಪ್ರಿಯ. ದಿನಾ ಕಾಲೇಜು ಬಿಡುವಾಗ
ಹುಡುಗಿಯರಿಗಾಗಿ ಕಾಲೇಜಿನ ಸಮೀಪ ಇರುವ ಬಸ್ಸು ನಿಲ್ದಾಣದಲ್ಲಿ ಹುಡುಗಿಯರಿಗಾಗಿ ಕಾಯುತ್ತಿದ್ದ. ದಿನ
ಕಳೆದಂತೆ ಹೇಗೂ ಮಾಡಿ ಒಂದು ಹುಡುಗಿಯನ್ನು ತನ್ನ ಬಲೆಗೆ ಹಾಕಿ ಬುಟ್ಟಿಯಲ್ಲಿಟ್ಟು ಬಿಟ್ಟ. ಅವಳ
ಹೆಸರು ವೈ. ವೈ ಬಲೆಗೆ ಬಿದ್ದದ್ದೇ ತಡ ದಿನಾ ಅವಳಿಗಾಗಿ ಕಾಲೇಜು ಬಿಡುವಾಗ ಬಸ್ಸು ನಿಲ್ದಾಣದಲ್ಲಿ
ಕಾಯುವ ಕಾಯಕ ಮಾಡುತ್ತಿದ್ದ. ಕಾಲ ಸರಿದಂತೆ ಅವಳನ್ನು ತನ್ನ ಬೈಕಿನಲ್ಲಿ ಕುಳ್ಳಿರಿಸಿ ಅವಳ ಮನೆಯ
ಪಕ್ಕದ ಬಾಕೆರ್ ಗದ್ದೆಯ ಬಳಿ ಬಿಡುತ್ತಿದ್ದ. ಇದನ್ನು ಕೆಲವು ಉರಾಚಿನವರು ನೋಡಿ ಗುಸು-ಗುಸು ಸುದ್ಧಿ
ಹರಡಿಸಿ ಹುಡುಗಿಯ ಮನೆಯವರಿಗೆ ಬುಸು ಬುಸು ಮಾಡುವಂತೆ ಮಾಡಿದ್ದು ಈಗ ಹಳೇ ನೆನಪು.
ಎಕ್ಸ್ ಗೊಬ್ಬ
ಹಾಯ್ ಬಾಯ್ ಗೆಳೆಯನಿದ್ದ. ಯಾವಾಗಲು ಎಕ್ಸ್ ತನ್ನ ಡೌ ಬಗ್ಗೆ ಗೆಳೆಯನಲ್ಲಿ ಕೊಚ್ಚಿ
ಕೊಳ್ಳುತ್ತಿದ್ದ. ತಾನೊಬ್ಬ ಹೀರೋ ಎಂಬಂತೆ ಪೋಸು ಕೊಡುತ್ತಿದ್ದ. ಒಂದು ದಿನ ಹಾಯ್ ಬಾಯ್ ಗೆಳೆಯನನ್ನೂ
ಬೈಕ್ ನಲ್ಲಿ ಕುಳ್ಳಿರಿಸಿ ತನ್ನ ಪ್ರಿಯತಮೆಯನ್ನು ತೋರಿಸುತ್ತೇನೆಂದು ಕರೆದುಕೊಂಡು ಹೋಗಿ
ಕಾಲೇಜಿನ ಹತ್ತಿರದ ಬಸ್ಸು ತಂಗುದಾಣದಲ್ಲಿ ಕಾಯ ತೊಡಗಿದ. ಎಂದಿನಂತೆ ಕಾಲೇಜು ಮುಗಿಸಿ ಆ’ ವೈ’
ಲಲನಾಮಣಿ ತನ್ನ ಗೆಳತಿ ‘ಹರಿಣಿ’ ಜತೆಗೆ ದೂರದಿಂದ
ಬರುತ್ತಿದ್ದುದನ್ನು ಹಾಯ್ ಬಾಯ್ ಗೆಳೆಯನಿಗೆ ಎಕ್ಸ್ ತೋರಿಸಿತ್ತಾನೆ. ಲಲನಾಮಣಿಗಳು ಹತ್ತಿರ ಬರುತ್ತಿದ್ದಂತೆ ಅದರಲ್ಲಿ ಚಿನ್ನದ ಬಣ್ಣದ ಡ್ರೆಸ್
ನೊಂದಿಗೆ ಆಕಾಶ ಬಣ್ಣದ ಶಾಲು ಹಾಕಿಕೊಂಡವಳೆ ನನ್ನವಳು ಎಂದು ತುಟಿಯಲ್ಲೊಂದು ನಾಚಿದ ನಗು ಬೀರಿ ಎಕ್ಸ್
ಉಲಿಯುತ್ತಾನೆ. ವ್ಹಾವ್ ಚೆನ್ನಾಗಿದ್ದಾಳೆ ಕಣೋ, ಬ್ಯುಟಿಫುಲ್ ಎಂದು ಹಾಯ್ ಬಾಯ್ ಗೆಳೆಯ ಎಕ್ಸ್
ಗೆ ಹೇಳುತ್ತಾನೆ. ಈಗ ಎಕ್ಸ್ ನಿಜವಾದ ಹೀರೋನಂತೆ ತಲೆ ಎತ್ತಿ ಇದಕ್ಕೆಲ್ಲ ‘ಡೆರಿಂಗ್’ ಬೇಕು ಕಣೋ
ಎಂದು ಎದೆ ತಟ್ಟುತ್ತಾನೆ. ಹೌದ.. ಲೈನ್ ಹೊಡೆಯಲು ಡೆರಿಂಗ್ ಬೇರೆ ಬೇಕಾ.. ಅಂತ ಹಾಯ್ ಬಾಯ್
ಪ್ರತ್ಯುತ್ತರ ಕೊಡುತ್ತಾನೆ. ನಿನ್ನಲ್ಲಿ ಡೆರಿಂಗ್ ಇದ್ದರೆ
ನೀನೂ ಅವಳೊಟ್ಟಿಗೆ ಇರುವ ‘ಹರಿಣಿಗೆ’ ಲೈನ್ ಹೊಡೆದು ತನ್ನ ಬುಟ್ಟಿಗೆ ಹಾಕಿ ತೋರಿಸು ಅಂತ ಸವಾಲನ್ನು
ಹಾಕಿ, ಒಂದು ಪುಕ್ಕಟೆ ಸಲಹೆಯನ್ನೂ ಕೊಡುತ್ತಾನೆ.
ಇತ್ತ ಪುಕ್ಕಟೆ ಸವಾಲು ಸಲಹೆಗೆ ನಾಚಿ ನೀರಾದ ಹಾಯ್ ಬಾಯ್ ಗೆಳೆಯ ಒಳಗಿಂದೊಳಗೆ ಆಶೆ ಎದ್ದರೂ, ಬೇಡ
ಮಾರಾಯ ನನ್ನಿಂದ ಆ ಕೆಲಸ ಆಗದು ಅಂತಾನೆ. ಅದಕ್ಕೇ ಹೇಳಿದ್ದು ಡೆರಿಂಗ್ ಬೇಕು ಕಣೋ ಎಂದು, ಅಂತ
ಮತ್ತೊಮ್ಮೆ ತಮಾಷೆ ಮಾಡಲು ಎಕ್ಸ್ ಮರೆಯುದಿಲ್ಲ.
ಹೌದು, ಹರಿಣಿ ಕೂಡಾ ಸುಂದರ ಲಕ್ಷಣವಾಗಿಯೇ ಇದ್ದಾಳೆ.
ಮರೂನ್ ಬಣ್ಣದ ಚೂಡಿದಾರ್ ಉಟ್ಟು ಬಿಳಿ ಬಣ್ಣದ ದುಪ್ಪಟ ಹಾಕಿ ಮೋಹಕ ನಗೆಯೊಂದಿಗೆ ಕಂಡ ಆ ಕ್ಷಣ
ಹಾಯ್ ಬಾಯ್ ಗೆ ಮರೆಯಲು ಆಗಲೇ ಇಲ್ಲ. ಹಗಲೂ ರಾತ್ರಿ ಅವಳದೇ ನೆನಪನ್ನು ಮೆಲುಕು ಹಾಕುತ್ತಾ ತನಗೂ
ಏಕಾಂತ ಡೌ ಆಗಿದೆ ಅಂತ ತಿಳಿಯಲು ಅವನಿಗೆ ಸಮಯ ಹಿಡಿಯುವುದಿಲ್ಲ. ಆದರೆ ಏನು ಮಾಡುವುದು. ನೇರ
ಹೋಗಿ ಅವಳಲ್ಲಿ ಮಾತನಾಡುವ ಧೈರ್ಯ ಅವನಲ್ಲಿರಲಿಲ್ಲ. ಏಕಾಂತ ಪ್ರೀತಿಗೆ ತೊಡಗುತ್ತಾನೆ. ರಾತ್ರಿ
ಹಗಲು ಅವಳದ್ದೇ ಧ್ಯಾನ, ಅವಳದ್ದೇ ಕನಸು. ಸರಿಯಾಗಿ ನಿದ್ದೆಯೂ ಇಲ್ಲ. ಹೀಗಿರುವಾಗ ಒಂದು ದಿನ
ಅವನಿಗೊಂದು ಕೆಲಸದ ಅಫಾರ್ ಬರುತ್ತದೆ. ಊರು ಬಿಟ್ಟು ದೂರ ಹೋಗುತ್ತಾನೆ.ಹೊಸ ಪರಿಸರ, ಹೊಸ ಚೊಚ್ಚಲ
ಕೆಲಸವಾದ್ದರಿಂದ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಕ್ರಮೇಣ ಹರಿಣಿಯ ನೆನಪು ಮನಸ್ಸಿನಿಂದ ಡಿಲೀಟ್
ಆಗಿ ಹೋಗುತ್ತದೆ.
ಸರಿ ಸುಮಾರು ಇಪ್ಪತ್ತು ವರ್ಷಗಳೇ ಕಳೆದಿವೆ. ಇತ್ತ ‘ಎಕ್ಸ್’ ‘ವೈ’ ಳನ್ನು ವರಿಸಿ ಎಕ್ಸ್ ವೈ ಜೆಡ್ ಆದ
ಬಗ್ಗೆ ಮಾಹಿತಿ ಇತ್ತು. ಆದರೆ ಹರಿಣಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಹಾಯ್ ಬಾಯ್ ಆ ಬಗ್ಗೆ
ಚಿಂತನೆಯನ್ನೂ ಮಾಡಿರಲಿಲ್ಲ. ಅವನೂ ಮದುವೆಯಾಗಿ ಸೆಟಲ್ ಆಗಿದ್ದ.
ಒಮ್ಮೆ ಇದ್ದಕ್ಕಿದ್ದಂತೆ ಹಾಯ್ ಬಾಯ್ ಗೆ, ಹಲೋ ಎಂಬ ಒಂದು ಸಂದೇಶ ಬರುತ್ತದೆ.
ಅವನಿಗೆ ಸಂದೇಶ ಕಳುಹಿಸಿದವರು ಯಾರು ಎಂದು ಗೊತ್ತಿಲ್ಲದಿದ್ದರೂ ಹಲೋ ಅಂತ ಪ್ರತಿ ಸಂದೇಶ
ಕಳುಹಿಸುತ್ತಾನೆ. ಹೀಗೆ ಸಹಜ ಮಿತ್ರತ್ವದ ಸಂದೇಶಗಳು ಆಗೊಮ್ಮೆ ಈಗೊಮ್ಮೆ ರವಾನೆಯಾಗುತ್ತಿದ್ದವು. ಎದುರಿನಿಂದ ಸಂದೇಶ
ಕಳುಹಿಸುವವಳು ‘ಸಹನಾ’ ಅಂತ ತನ್ನ ಹೆಸರನ್ನು ಹೇಳಿಕೊಂಡಿದ್ದಳು. ಸಹನಾ ಒಂದು ದಿನ ಸಂದೇಶದಲ್ಲಿ
ನಿನಗೆ ‘‘ಎಕ್ಸ್’ ನ ಪರಿಚಯ ವಿದೆಯಾ? ಎಂದು
ಕೇಳುತ್ತಾಳೆ. ಯಾಕೆ ಅಂತ ಪ್ರತ್ಯುತ್ತರ ಹೋಗುತ್ತೆ. ಯಾಕಿಲ್ಲ, ಅವನು ನನ್ನ ಕಾಲೇಜು ಗೆಳತಿ ‘’ವೈ’’
ನ ಪತಿ. ವೈ ನನಗೆ ಸಿಗದೆ ತುಂಬಾ ವರ್ಷಗಳಾಗಿವೆ.
ನೀವು ಅದೇ ಊರಿನವರೆಂದು ತಿಳಿದು ನಿಮ್ಮಲ್ಲಿ ಕೇಳಿದೆ ಬೇಸರಿಸ ಬೇಡಿ ಅಂತ ಉತ್ತರ ಬರುತ್ತೆ. ಹೌದು
ನನಗೆ ‘ಎಕ್ಸ್’ ನ ಪರಿಚಯವಿದೆ ಎಂದು ಸಂಪರ್ಕ
ವಿಳಾಸ ಕೊಡುತ್ತಾನೆ.
ಇತ್ತ, ಎಕ್ಸ್ ಮೂಲಕ ಗೊತ್ತಾಗುತ್ತದೆ ಸಹನಾ ತಾನು ಹದಿ
ಹರೆಯದಲ್ಲಿದ್ದಾಗ ಏಕಾಂತ ಪ್ರೀತಿಯ ಚಾದರ ಹೊದ್ದು ಮಲಗಿಸುವಂತೆ ಮಾಡಿದ ಹರಿಣಿ ಎಂದು! ಆದರೆ ಹರಿಣಿಗೆ
ಮಾತ್ರ ಇನ್ನೂ ಗೊತ್ತೇ ಇಲ್ಲ ತಾನು ಸಂದೇಶ ಕಳುಹಿಸಿದ ಗೆಳೆಯ ಯಾರು ಎಂದು! ಯಾಕೆಂದರೆ ಅವಳು ನನ್ನನ್ನು ಎಂದೆಂದೂ ನೋಡಿಯೇ ಇರಲಿಲ್ಲ!
ಇದೇ ಜೀವನದ ಸೋಜಿಗವಲ್ಲವೆ?
ಸ್ಪೂರ್ತಿ ಬಂಟಕಲ್ಲು.
ಈ x y ನಂತಹ ಸಹಪಾಠಿಗಳೇ ಅಲ್ಲದೆ ನನ್ನ ಕಾಲೇಜು ದಿನಗಳಲ್ಲಿ m v r ಗಳೂ ಇದ್ದರಪ್ಪ !! :-D ಬಹುಶಃ ಈ ಬರಹ type ಮಾಡುತ್ತಿರುವ ಹೊತ್ತಿಗೆ ಆ m v r ಗಳೂ ಮರಿಗಳು ಹಾಕಿ - ಆ ಮಾರಿಗಳಿಗೂ ಮದುವೆಯಾಗಿ - ಅವಕ್ಕೂ ಪುಟ್ಟ ಪುಟ್ಟ ಮರಿಗಳು ಹುಟ್ಟಿರಬಹುದು ಅನಿಸುತ್ತದೆ. what do u say ಪ್ರಭೂಜೀ?
ReplyDeleteಈ ಪೋಸ್ಟನ್ನು cc to ಆಜಾದ್ ಸಾರೂ :)