Saturday, September 8, 2012

ಶ್ರೀ ಕೃಷ್ಣನ ಹುಟ್ಟಿನ ಹಿಂದೆ..


ಶ್ರೀ ಕೃಷ್ಣನ ಹುಟ್ಟಿನ ಹಿಂದೆ..

 
ಕೃಷ್ಣ ಹುಟ್ಟದಿದ್ದರೆ ಏನಾಗುತ್ತೋ ಅದು ಬೇರೆ ವಿಚಾರ,
ಕೃಷ್ಣ ಹುಟ್ಟಿದ್ದರಿಂದ ನಮಗೊಂದು ಪಾಠವಾಯಿತು,
ಕಥೆ, ಕವನ, ಕಾದಂಬರಿಗೊಂದು ದಾರಿಯಾಯಿತು,

ಸುಖ ಕಷ್ಟಗಳೇನೆಂಬುದರ  ಗೋಚರವಾಯಿತು,
ನೊಂದ ಮನಸ್ಸುಗಳಿಗೊಂದು  ಹಬ್ಬ-ಹರಿದಿನವಾಯಿತು,
ಜೂಜು - ಜುಗಾರಿಗಳೇನೆಂಬುದರ ಅರ್ಥವಾಯಿತು.

ಜಾಗೃತ ಮನಸ್ಸಿಗೆ ಬಂದೀಖಾನೆಯ ಪರಿಚಯ ವಾಯಿತು,
ಸುರಿಯುವ ಮಳೆ ಪ್ರವಾಹ ಪ್ರಳಯಗಳ ಭಯವೂ  ಹುಟ್ಟಿತು,
ಜ್ಞಾನ - ಜಾಗೃತಿ ಗಳೆಂಬ ಶಭ್ದಗಳ ಹುಟ್ಟಿಗೂ ಕಾರಣವಾಯಿತು.

 
ಪ್ರೀತಿ-ಪ್ರೇಮ, ಆಟ-ಚೆಲ್ಲಾಟಗಳಿಗೊಂದು ಹೂದೋಟದ ಸೃಷ್ಟಿಯಾಯಿತು,
ಸರಸ-ಸಲ್ಲಾಪ,  ರಸ-ನವರಸಗಳಿಗೆ ಶ್ರುತಿ ಮೀಡಿ ಸಂಗೀತ  ವಾಯಿತು,
ಸ ರಿ ಗ ಮ ಪ ದ ನಿ (ಸ) ಗಳೆಂಬ ಸಪ್ತ ಸ್ವರ  ಸೃಷ್ಟಿಯ ಪುಷ್ಟಿಕೊಟ್ಟಿತು.

 
                                                                        ಸ್ಪೂರ್ತಿ
                                              ಬಂಟಕಲ್ಲು

No comments:

Post a Comment