
ರಸ್ತೆ
*****
ನಮ್ಮ
ಜೀವನದಲ್ಲಿ
ಮುಂದುವರಿಯಲು
ಇರುವ
ವ್ಯವಸ್ಥೆ.
ತಪ್ಪಿದರೆ
ಅವಸ್ಥೆ!
ತಿರುವು
******
ಹದಿ
ಹರೆಯದ
ಅಂತಿಮ
ಘಟ್ಟದ
ಅಂತಿಮ
ಕ್ಷಣದ
ಅಂತಿಮ
ನಿರ್ಧಾರ!
ಅನುಕರಣೆ!
*******
ನಕ್ಕರೆ
ನಗುವುದು
ಅತ್ತರೆ
ಅಳುವುದು
ನಲಿದರೆ
ನಲಿಯುದು
ಸತ್ತರೆ?
ಸುಡುವುದು!
ಹೊಟ್ಟೆ ಕಿಚ್ಚು
*******
ಆಲಸೀ
ಮನಸ್ಸಿನ
ಲಾಲಸೀ
ಜೀವನದ
ಹದ್ದು
ತಪ್ಪಿದಾಗ
ಹುಟ್ಟುವ
ಶಕ್ತಿ!
ವಾಯು
*****
ಪಚನ
ಶಕ್ತಿಯ
ವಚನ
ಮೀರಿ
ತಿಂದಾಗ,
ಉದರದಿ
ಹುಟ್ಟುವ
ಒತ್ತಡ!
ಸ್ಪೂರ್ತಿ
ಬಂಟಕಲ್ಲು.